ಫೈಟ�ೋಪಿಯ
ಸಸ್ಯ ಲ�ೋಕ 21.08.2020 — 30.08.2020
1
ಕ್ಯನಡಾ ದ ಮಾಂಟ್ರಿಯಲ್‌ನ ಕಲೆಗಾರರಾದ ರಾಕು ಇನ್ಕ್ಯೂ ಅವರ ಕಲಾಕೃತಿ
PHYTOPIA 2020
ಬೆಂಗಳೂರು ವಿಜ್ಞಾನ ವೇದಿಕೆ
2
ವಿಷಯ ಸೂಚಿ 1. ಹರ್ಬೇರಿಯ..............................................................6 2. ಒಣಗಿಸಿ ಇಸ್ತ್ರಿ ಮಾಡಿದ ಹೂವುಗಳು.................................10 3. ಟೆರೇರಿಯಮ್ಸ್ (ಸಸ್ಯಾಲಯ).........................................16 4. ಸುಗಂಧ-ಪರಿಮಳ ಮತ್ತು ಬಣ್ಣಗಳು.................................24 ನೈಸರ್ಗಿಕ ಸುಗಂಧ-ಪರಿಮಳ................................................27
ನೈಸರ್ಗಿಕ ಬಣ್ಣಗಳು...........................................................28
5. ಅಡಿಗೆ ಮನೆಯ ಔಷಧಿಗಳು..........................................32
Parental guidance advised for those below the age of 18 3
ಫೈಟ�ೋಪಿಯ 2020
ಬೆಂಗಳೂರು ವಿಜ್ಞಾನ ವೇದಿಕೆ
4
ಆತ್ಮೀಯ ಫೈಟ�ೋಪಿಯ ಸಹಭಾಗಿಗಳೇ, ಸುಂದರ, ವೈವಿಧ್ಯಮಯ ಸಸ್ಯ ಪ್ರಪಂಚಕ್ಕೆ ಸ್ವಾಗತ. ಸಸ್ಯಸಂಕುಲವು ತಮ್ಮ ಪ್ರಭಾವದಿಂದ ನಮ್ಮ ಜೀವನವನ್ನು ವರ್ಣಮಯವಾಗಿಸುತ್ತವೆ. ನಮ್ಮ ಪ್ರದರ್ಶಿಕೆಗಳನ್ನು ನ�ೋಡಿ, ಉಪನ್ಯಾಸಗಳನ್ನು ಕೇಳಿ, ಕಾರ್ಯಾಗಾರಗಳಲ್ಲಿ ಭಾಗಿಯಾಗಿ, ಉಲ್ಲಾಸಕರ ಅನುಭವವನ್ನು ಪಡೆದಿರುವಿರಿ ಎಂದು ಭಾವಿಸುತ್ತೇವೆ. ನಮ್ಮ ಡಿಜಿಟಲ್‌ಪ್ರದರ್ಶನ ಫೈಟ�ೋಪಿಯದ ಜೊತೆಯಲ್ಲಿ ಈ ಚಟುವಟಿಕೆ ಕೈಪಿಡಿಯನ್ನು ನೀಡಲಾಗುತ್ತಿದೆ. ಈ ಚಟುವಟಿಕೆಗಳ ಮೂಲಕ ಬಹುಕಾಲಿಕ, ಚಿರ, ಚೈತನ್ಯ ಸಸ್ಯಗಳ ಬಗ್ಗೆ ಹೆಚ್ಚು ಒಲವು ಮೂಡುವುದರಲ್ಲಿ ಸಂಶಯವಿಲ್ಲ. ಸ್ವ-ಸಂಪೂರ್ಣ ಜೀವ ಪರಿಸರವನ್ನು ನಿರ್ಮಿಸಿ, ವಿವಿಧ ಸಜೀವ ಮತ್ತು ನಿರ್ಜೀವ ವಸ್ತುಗಳು ಪರಸ್ಪರ ಪ್ರಭಾವ ಬೀರುತ್ತವೆ ಎಂದು ಕಂಡುಕೊಳ್ಳ ಬಹುದು. ಸಂರಕ್ಷಿತ ಸಸ್ಯ ನಮೂನೆಗಳು , ವೈಜ್ಞಾನಿಕ ಅಧ್ಯಯನ ಮತ್ತು ಸಾಂಸ್ಕೃತಿಕ ಸಿರಿ-ಸಂಪದದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಹರ್ಬೇರಿಯಮ್‌ಹಾಳೆಗಳನ್ನು ಜ�ೋಡಿಸಿ ಅರಿತುಕೊಳ್ಳ ಬಹುದು. ನಿಮ್ಮ ಇಚ್ಛೆಯ ನೈಸರ್ಗಿಕ ಸುಗಂಧಗಳನ್ನು ತಯಾರಿಸಿ, ಹೂವು ಹಣ್ಣುಗಳಿಂದ ಉತ್ಪಾದಿಸಿದ ರಂಗಿನಿಂದ, ಬಣ್ಣದ ಲ�ೋಕವನ್ನು ಸೃಷ್ಟಿಸಿ. ಬೆಂಗಳೂರು ವಿಜ್ಞಾನ ವೇದಿಕೆಯು ಸಂಯೋಜಿಸಿ ಪ್ರಸ್ತುತ ಪಡಿಸಿರುವ ಈ ಚಟುವಟಿಕೆಗಳ ಆಹ್ಲಾದಕರ ಅನುಭವವು ನಿಮ್ಮದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಈ ಹ್ಯಾಶ್ ಟ್ಯಾಗ್‌ಬಳಸಿಕೊಂಡು #ExperimentWithSGB and #Phytopia ತಮ್ಮ ಸೃಜನಶೀಲ ಕಲಾಕೃತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಹೃತ್ಪೂರ್ವಕ ಅಭಿನಂದನೆಗಳು, ಬೆಂಗಳೂರು ವಿಜ್ಞಾನ ವೇದಿಕೆ ತಂಡ
5
ಫೈಟ�ೋಪಿಯ 2020
ಹರ್ಬೇರಿಯಾದ ಅವಶ್ಯಕತೆ ಹರ್ಬೇರಿಯಾ ಎಂದರೇನು? ಅವುಗಳು ಹೇಗೆ ಉಪಯೋಗಕಾರಿ?
ಬೆಂಗಳೂರು ವಿಜ್ಞಾನ ವೇದಿಕೆ
6
ನೀ ಮುಡಿದ ಹೂವಲಿರುವೆ ನಾನು, ನನ್ನನೂ ಮುಡಿವೆಯೇನು ನೀನು, ಪರಿಗಳಿರವು ನಿನ್ನಲರಳಿ ನೀ ಮುಡಿ ನನ್ನನೂ. ಮುಡಿಯೇರಿದ ಹೂವಿನೊಳಿರುವೆನು ಹೂದಾನಿಯ ಹೂವೇನಲ್ಲ ನಾನು, ನನ್ನ ಅರಿತರೆ ನೀನು ನನ್ನಲೇ ಇರುವೆನು ನಾನು. -ಎಮಿಲಿ ಡಿಕಿನ್‌ಸನ್‌ಅವರ ಕವಿತೆಯ ರೂಪಾಂತರಣ
ಎಮಿಲಿ ಡಿಕಿನ್‌ಸನ್, ತಮ್ಮ ಕವಿತೆಗಳಿಂದ ವಿಶ್ವದ ಕಲ್ಪನೆ ಮತ್ತು ಗಮನ ಸೆಳೆದಿದ್ದಾರೆ, ಇವರು ಚಿಕ್ಕ ವಯಸ್ಸಿನಲ್ಲಿಯೇ ವಿಭಿನ್ನವಾದ ಒಂದು ಚಟುವಟಿಕೆಯಲ್ಲಿ ತೊಡಗಿದರು. ಹೂವುಗಳನ್ನು ಒತ್ತಿ, ಒಣಗಿಸಿ, ವಿಂಗಡಿಸಿ, ಅವುಗಳ ವಿವರಗಳನ್ನು ಸಂಕಲನ ಮಾಡುತ್ತಿದ್ದರು, ಈ ಕಲಾಕೃತಿಗಳನ್ನು ಸಂಯೋಜಿಸಿ ಗಮನಿಸುತ್ತಿದ್ದರು. ಎಮಿಲಿ ಡಿಕಿನ್‌ಸನ್ ಸಸ್ಯಶಾಸ್ತ್ರದ ಅಧ್ಯಯನವನ್ನು ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಪ್ರಾರಂಭಿಸಿದರು. ಮೌಂಟ್‌ಹ�ೋಲಿಯೋಕ್‌ಸಂಸ್ಥೆಯಲ್ಲಿ ಹೆಚ್ಚಿನ ಉತ್ಸಾಹದಿಂದ, ವಿಸ್ತಾರವಾಗಿ ಸಸ್ಯಶಾಸ್ತ್ರದ ಅಧ್ಯಯನವನ್ನು ನೆಡೆಸಿದರು. ತಮ್ಮ ಶಾಲೆಯ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರು ಆಗಿದ್ದ, ನುರಿತ ಸಸ್ಯ ವಿಜ್ಞಾನಿ ಮೇರಿ ಲಿಯೋನ್‌ಅವರಿಂದ ಪ್ರೇರಣೆ ಪಡೆದರು. ಎಮಿಲಿ ತಮ್ಮ ಹದಿಮೂರರ ಹರಯದಲ್ಲೇ ಸಾಕಷ್ಟು ಸಸ್ಯ ನಮೂನೆಗಳನ್ನು ಸಂಗ್ರಹಿಸಿ, ಸಸ್ಯ-ಸಂಕಲನ ತಯಾರಿಸಿದರು. ಹಾಗೆಯೇ ತಮ್ಮ ಸ್ನೇಹಿತರಿಗೆ ಪತ್ರದಲ್ಲಿ “ನೀವು ಎಂದಾದರೂ ಹರ್ಬೇರಿಯಮ್‌ಸಂಕಲಿಸಿರುವಿರೇ? ಅದು ಬಹು ಉಪಯುಕ್ತ ಸಂಪತ್ತು”, ಎಂದು ಬರೆದಿದ್ದರು. ಈ ಸಂಕಲನದಲ್ಲಿ ಅರವತ್ತಾರು ಪುಟಗಳಿದ್ದವು, 424 ಸಸ್ಯ ನಮೂನೆಗಳಿಂದ ಕೂಡಿದ್ದು ಅವುಗಳಲ್ಲಿ ಅರವತ್ತು ಸಸ್ಯಗಳ ವೈಜ್ಞಾನಿಕ ಹೆಸರು ಸಮೇತ ದಾಖಲು ಮಾಡಲಾಗಿತ್ತು. ಹಾರ್ವರ್ಡ್‌ವಿಶ್ವವಿದ್ಯಾಲಯದ ಹೌಗ್ಟನ್ ಗ್ರಂಥಾಲಯದಲ್ಲಿ ಈ ಹರ್ಬೇರಿಯಮ್‌ಸಸ್ಯ ಸಂಕಲನವನ್ನು ಕಾಪಾಡಲಾಗಿದೆ. ಈ ಸಂಕಲನದಲ್ಲಿ, ಸಸ್ಯಗಳ ಯಾವುದೇ ನಿರ್ಧಿಷ್ಟ ವಿಭಜನೆ ಕ್ರಮಾವಳಿ ಇಲ್ಲದಿದ್ದರೂ, ಸಮರೂಪತೆ ಮತ್ತು ಸಮತ�ೋಲನದ ಆಧಾರದ ಮೇಲೆ ಕಣ್ಣಳತೆಯ ಸಂಯೋಜನೆ ಕಂಡುಬರುತ್ತದೆ. ಎಲ್ಲಾ 66 ಪುಟಗಳನ್ನೂ ಹಾರ್ವರ್ಡ್‌ಗ್ರಂಥಾಲಯದ ವೆಬ್ ಸೈಟ್‌ನಲ್ಲಿ ವೀಕ್ಷಿಸ ಬಹುದು.
7
ಫೈಟ�ೋಪಿಯ 2020
ಹರ್ಬೇರಿಯಾ ಪರಿಭಾಷೆ ಜೀವ ವೈವಿಧ್ಯತೆ, ಜೀವಪರಿಸರ ಮತ್ತು ವಿಕಸನ ಅಧ್ಯಯನಗಳಲ್ಲಿ ‘ಹರ್ಬೇರಿಯಾ’ ಬಹು ಮುಖ್ಯ ಸಾಧನವೆಂದು ಏಕೆ ಪರಿಗಣಿಸಲಾಗಿದೆ ?
ಸಸ್ಯ ನಮೂನೆಗಳನ್ನು ಕಲೆಹಾಕಿ, ಅವುಗಳನ್ನು ಕಾಗದದ ಹಾಳೆಗಳ ಮೇಲೆ ಒತ್ತಿ, ಒಣಗಿಸಲಾಗುತ್ತದೆ. ಇದು ಒಂದು ಗ್ರಂಥಾಲಯ, ಜೀವ ರೂಪದ ಸಂಗ್ರಹಣೆ. ಹೀಗೆ ಸಂರಕ್ಷಿತ ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ಅವುಗಳ ಜೊತೆಗೇ ಪಟ್ಟಿ ಮಾಡಲಾಗುತ್ತದೆ. ಇಂತಹ ಸಂಗ್ರಹಣೆಯನ್ನು ಸಾಂದರ್ಭಿಕ ಸಾಮಗ್ರಿಯಾಗಿ ಸಸ್ಯಗಳ ವಿವಿಧ ವರ್ಗೀಕರಣ ಹಾಗೂ ಸಸ್ಯ ಗುಂಪುಗಳನ್ನು ವಿವರಿಸುವಾಗ ಬಳಸಲಾಗುತ್ತದೆ. ಹೀಗೆ ಸಸ್ಯಗಳ ಹೊರಾವರಣ ರೂಪಗಳು (ಎಲೆಗಳ ಎರಡೂ ಪಕ್ಕೆಗಳು ಮತ್ತು ಹೂವಿನ ಎಲ್ಲಾ ಭಾಗಗಳು) ಕಾಣುವಂತೆ ಸಂಗ್ರಹಣಗೊಳಿಸಿದ್ದರೆ, ವಿಜ್ಞಾನಿಗಳು ಮತ್ತು ಸಂಶ�ೋಧಕರು ತಮ್ಮ ಅಧ್ಯಯನಕ್ಕೆ ಈ ಮೂಲಕ ಸಸ್ಯ ನಮೂನೆಗಳನ್ನು, ಬೇಗ ಗುರುತಿಸ ಬಹುದು. ಹರ್ಬೇರಿಯಾ (ಸಸ್ಯ-ಸಂಕಲನ) ದಲ್ಲಿ, ಸಸ್ಯವು ಯಾವ ಪರಿವಾರ(ಫ್ಯಾಮಿಲಿ), ವರ್ಗ (ಜೀನಸ್) ಮತ್ತುಜಾತಿ(ಸ್ಪೀಶಿಸ್)ಗೆ ಸೇರಿದೆ, ಎಂಬುದರ ಜೊತೆಗೆ ಯಾರು, ಯಾವ ಸ್ಥಳದಿಂದ ಈ ಸಸ್ಯ ನಮೂನೆಯನ್ನು ಕಲೆಹಾಕಿದರು ಎಂಬ ವಿಷಯವು ಸಹ ಅಂಕಿತವಾಗಿರುತ್ತದೆ. ಸಸ್ಯಗಳನ್ನು ಪ್ರಾಕೃತಿಕವಾಗಿ ಬೆಳೆದಿರುವ ಹಲವಾರು ಭೂಭಾಗಳಿಂದ ಆರಿಸಲಾಗುತ್ತದೆ, ಬೇರೆ ಬೇರೆ ಜಾಗಗಳಲ್ಲಿ ಬೆಳೆದ ಒಂದೇ ಜಾತಿಯ ಸಸ್ಯಗಳು ಸಹ, ಪರಿಸರ ಭಿನ್ನತೆಯ ಕಾರಣ ವಿಭಿನ್ನ ತಳಿಗಳಾಗಿರುತ್ತವೆ. ಹರ್ಬೇರಿಯಮ್‌ನಮೂನೆಗಳಾಗಿ, ಈ ಸಸ್ಯಗಳ ಎಲ್ಲಾ ವಿವರಗಳನ್ನೂ ದಾಖಲಿಸುವುದರಿಂದ ವಂಶ ವಾಹಕಗಳ ಹಂತದಲ್ಲಿ, ವಂಶವಾಹಕಗಳ ರೂಪ, ರಚನೆಯ ಅಧ್ಯಯನಕ್ಕೂ ಸಹಕಾರಿಯಾಗುತ್ತವೆ. ಕಾಲಾಂತರದಲ್ಲಿ ಸಸ್ಯರಾಶಿಗಳಲ್ಲಿ ಆಗುವ ಬದಲಾವಣೆಗಳು, ಇಂತಹ ದಾಖಲೆಯಿಂದ ಗ�ೋಚರವಾಗುತ್ತವೆ, ಕೆಲವು ಸಸ್ಯ ತಳಿಗಳು ಕೆಲವು ಪ್ರದೇಶದಿಂದ ಕಣ್ಮರೆಯಾಗುವ ಸಾಧ್ಯತೆ ಇದೆ, ಹೀಗಾಗಿ ‘ಹರ್ಬೇರಿಯಾ’ ಸಂಕಲನ ಇತಿಹಾಸದ ದೃಷ್ಟಿಯಿಂದ ಕೂಡ ಸಹಕಾರಿ. ನಿರ್ಮೂಲನಗೊಂಡ ಅಂತಹ ಸಸ್ಯಗಳು ಯಾವ ಪ್ರದೇಶಕ್ಕೆ ಸೇರಿದವು ಎಂಬುದನ್ನು ಈ ದಾಖಲೆಗಳ ಮೂಲಕ ಅರಿಯ ಬಹುದು. ಸಸ್ಯ ಶಾಸ್ತ್ರಜ್ಞ, ಪ್ರಾಣಿ ಶಾಸ್ತ್ರಜ್ಞ ಮತ್ತು ವೈದ್ಯರಾದ ಕಾರ್ಲ್‌ಲಿನೇಯಸ್‘ಬೈನ�ೋಮಿಯಲ್‌ನಾಮೆನ್‌ಕ್ಲೇಚರ್’ (ಅಂದರೆ ಯಾವುದೇ ಜೀವಿಯನ್ನು, ಅದು ಸೇರಿರುವ ಜೀನಸ್‌ಮತ್ತು ಸ್ಪೀಶಿಸ್‌ನ ಹೆಸರುಗಳನ್ನು ಒಟ್ಟುಗೂಡಿಸಿ ಹೆಸರಿಸುವ ವಿಧಾನ, ಉದಾಹರಣೆ: ಮಾನವನಿಗೆ - ಹ�ೋಮೋ ಸಾಪೈನ್) ನಾಮಕರಣವನ್ನು ಪರಿಚಯಿಸಿದರು. ಸಸ್ಯ ರೂಪಾಂತರಣದ ವಿಷಧವಾದ ಅಧ್ಯಯನದ ಮೂಲಕ ಪ್ರತಿ ಜೀವಿಯನ್ನು ವಿಂಗಡಿಸುವ ತಮ್ಮ ಸಂಶ�ೋಧನೆಯಲ್ಲಿ ತೊಡಗಿದರು. ತಮ್ಮ ಹರ್ಬೇರಿಯಮ್‌ಸಂಕಲನದಲ್ಲಿ ಸಸ್ಯಗಳನ್ನು ಅವುಗಳ ಜನನಾಂಗ ಸ್ಟೇಮನ್‌ಮತ್ತು ಪಿಸ್ಟಿಲ್‌ಗೆ ಸಂಬಂಧಿಸಿದಂತೆ ಕ್ರಮವಾಗಿ ಜ�ೋಡಿಸಿದ್ದರು. ಈ ಹಳೆಯ ವರ್ಗೀಕರಣವೇ, ಜೀವಿಗಳ ಆಧುನಿಕ ವರ್ಗೀಕರಣ ವ್ಯವಸ್ಥೆಗೆ ಹಾದಿ ಮಾಡಿ ಕೊಟ್ಟಿದೆ. ಸುಮಾರು ನಾಲ್ಕು ಸಾವಿರ ಸಸ್ಯ ನಮೂನೆಗಳನ್ನು ಹೊಂದಿರುವ ಅವರ ಹರ್ಬೇರಿಯಮ್‌ಸಂಕಲನವನ್ನು ಈಗ ಇಂಗ್ಲಾಂಡ್‌ನ ‘ಲಿನೇಯನ್‌ಸೊಸೈಟಿ’ ಯಲ್ಲಿ ಸಂರಕ್ಷಿಸಲಾಗಿದೆ.
ಬೆಂಗಳೂರು ವಿಜ್ಞಾನ ವೇದಿಕೆ
8
9
ಫೈಟ�ೋಪಿಯ 2020
ಇಸ್ತ್ರಿ ಮಾಡಿದ ಹೂವುಗಳು ಪ್ರಾರಂಭಿಕ ಮಾರ್ಗದರ್ಶಿ
ಬೆಂಗಳೂರು ವಿಜ್ಞಾನ ವೇದಿಕೆ
10
ಇದು ಒಂದು ಸಣ್ಣ ಅಭ್ಯಾಸ. ನಿಮ್ಮ ತ�ೋಟದಲ್ಲಿ ಬೆಳೆದ ಸಸ್ಯಗಳನ್ನು ಕಲೆಹಾಕಿ, ಸುಂದರ ಕಲಾಕೃತಿಗಳಾಗಿ ಜ�ೋಡಿಸಿ ಹರ್ಬೇರಿಯಮ್(ಸಸ್ಯ ಸಂಕಲನ) ಪುಸ್ತಕವನ್ನು ತಯಾರಿಸಿ. ಇಲ್ಲಿ ಹೇಳಿರುವ ಸೂಚನೆಗಳನ್ನು ಅನುಸರಿಸಿ ನೀವು ಸೃಷ್ಟಿಸಿದ ಕಲಾಕೃತಿಯನ್ನು ನಮ್ಮಂದಿಗೆ ಹಾಶ್ ಟ್ಯಾಗ್ ಮೂಲಕ ಹಂಚಿಕೊಳ್ಳಿ . (#ExperimentWithSGB and #Phytopia.)
11
ಫೈಟ�ೋಪಿಯ 2020
ಬೇಕಾಗುವ ಸಾಮಗ್ರಿಗಳು ಪುಸ್ತಕಗಳು ಮತ್ತು ಸಮಾಚಾರ ಪತ್ರಿಕೆಗಳು ದಪ್ಪನೆಯ ಕಾಗದ ಇಲ್ಲವೇ ರಟ್ಟು ಪೆನ್ ಆಮ್ಲ (ಆಸಿಡ್) ಮುಕ್ತ ಗ�ೋಂದು
ಆಮ್ಲ (ಆಸಿಡ್) ಮುಕ್ತ ಗ�ೋಂದು • ಕೆಲವು ಹೂವುಗಳನ್ನು ಆರಿಸಿಕೊಳ್ಳಿ (ನಿಮ್ಮ ತ�ೋಟದಿಂದ). ಅರಳಿ ಒಣಗಿ ಉದುರುವ ಹೂವುಗಳಾದರೆ
ಒಳಿತು.
• ಒಂದು ಪುಸ್ತಕದ ಹಾಳೆಗೆ ಪತ್ರಿಕೆಯ ಹಾಳೆಯನ್ನು ಜ�ೋಡಿಸಿ. (ಈ ಜ�ೋಡಣೆ , ಮುಚ್ಚಲು
ಅನುಕೂಲವಾಗಿರ ಬೇಕು). ಪುಸ್ತಕದ ಹಾಳೆ ಮತ್ತು ಪತ್ರಿಕೆಯ ಹಾಳೆಯ ನಡುವೆ ಹೂವುಗಳನ್ನು ಭದ್ರವಾಗಿ ಒತ್ತಿ, ಪುಸ್ತವನ್ನು ಮುಚ್ಚಿ, ಅದರ ಮೇಲೆ ಭಾರವನ್ನು ಹೇರಿಡಿ. ಈ ನಮೂನೆಗಳನ್ನು ಬೆಚ್ಚಗೆ ಹಾಗು ಒಣಗಿರುವ ಜಾಗದಲ್ಲಿ ಇಡಿ. ಆಗಾಗ್ಗೆ ಅದನ್ನು ಗಮನಿಸಿ.
• ಈ ನಮೂನೆಗಳು ಒಮ್ಮೆ ಸಂಪೂರ್ಣ ಒಣಗಿದರೆ, ಈ ಹೂವುಗಳ ಸಂಗ್ರಹಣೆಯನ್ನು ಬಳಸಿಕೊಂಡು,
ಗ�ೋಂದು ಹಾಕಿ ಅಂಟಿಸಿ ವಿವಿಧ ಬಗೆಯ ಆಕೃತಿಗಳನ್ನು ರಚಿಸಿ, ಸುಂದರ ಕಾರ್ಡ್ ಗಳನ್ನು ತಯಾರಿಸ ಬಹುದು.
ಬೆಂಗಳೂರು ವಿಜ್ಞಾನ ವೇದಿಕೆ
12
ಹೂವುಗಳನ್ನು ಆರಿಸಿ, ಒತ್ತಿ ಒಣಗಿಸಿಡಲು ಕೆಲವು ಸಲಹೆಗಳು • ಕೆಲವು ಹೂವುಗಳನ್ನು ಸುಲಭದಲ್ಲಿ ಒಣಗಿಸಿ ಇಸ್ತ್ರಿ ಮಾಡಲಾಗದು. ಕೆಲವು ಹೂವುಗಳು ಒಣಗಲು ಬಹು
ಕಾಲ ಹಿಡಿಯುತ್ತದೆ. ಕೆಲವು, ಬೂಷ್ಟು ಹಿಡಿಯುವ ಸಾಧ್ಯತೆ ಇದೆ.
• ನೀವು ಆರಿಸಿರುವ ಗಿಡಕ್ಕೆ ಉದ್ದವಾದ ಕಾಂಡವಿದ್ದರೆ, ಅದರ ತೇವಾಂಶವನ್ನು ಬೇಗನೆ ಹೀರಲು ಟಿಶ್ಯೂ
ಕಾಗದವನ್ನು ಬಳಸಿ, ಪತ್ರಿಕೆಯ ಹೊದಿಕೆಯ ಮೇಲೆ ಟಿಶ್ಯೂವನ್ನು ಇಡುವುದರಿಂದ ತೇವಾಂಶವನ್ನು ಹೀರಲು ಸಹಕಾರಿಯಾಗುತ್ತದೆ.
• ಪತ್ರಿಕೆಯ ಹಾಳೆಯು ಸಸ್ಯ ನಮೂನೆಯಿಂದ ತೇವಾಂಶವನ್ನು ಹೀರಲು ಸಹಕಾರಿ, ಹಾಗೆಯೇ ಬೇಗನೆ
ಬೂಷ್ಟು ಹಿಡಿಯುವುದಿಲ್ಲ.
• ಪುಸ್ತಕದ ಎಲ್ಲಾ ಭಾಗಕ್ಕೂ ಸಮವಾಗಿ ಭಾರ ಹೇರ ಬೇಕು. ಇಲ್ಲವಾದರೆ, ಗಾಳಿಗೆ ತೆರೆದ ಸಸ್ಯದ ಭಾಗಗಳು
ಉದುರಿ ಹ�ೋಗುವ ಸಾಧ್ಯತೆ ಇದೆ.
• ಟೇಪ್‌ಬಳಸಬೇಡಿ. ಸಸ್ಯ ನಮೂನೆಯ ಬಣ್ಣ ಬದಲಾಗಬಹುದು, ಕಾರ್ಡ್ ಇಂದ ಜಾರಿ ಹ�ೋಗ ಬಹುದು. • ನೀವು ಆರಿಸಿಕೊಂಡಿರುವ ಸಸ್ಯವು ಪೂರ್ಣವಾಗಿ ಒಣಗಲು ಕೆಲವು ದಿನಗಳು ಇಲ್ಲವೇ ಕೆಲವು ವಾರಗಳು
ಹಿಡಿಯಬಹುದು. ಹೀಗೆ ಒಣಗಿಸಿದ ಸಸ್ಯ/ಹೂಗಳನ್ನು ಎಚ್ಚರಿಕೆಯಿಂದ ಬೇರೆಡೆಗೆ ವರ್ಗಾಯಿಸಬಹುದು. • (ಒಣಗಿದ ಸಸ್ಯ ಭಾಗಗಳು ಹರಿದು/ಮುರಿದು/ ಜಾರಿ ಹ�ೋಗಬಹುದು-ಎಚ್ಚರಿಕೆ).
13
ಫೈಟ�ೋಪಿಯ 2020
ಹರ್ಬೇರಿಯಮ್(ಸಸ್ಯ ಸಂಕಲನ) ಹಾಳೆ ತಯಾರಿಸುವ ವಿಧಾನ • ಕೇವಲ ಹೂವು ಬಿಡುವ ಸಸ್ಯಗಳೇ ಅಲ್ಲದೆ, ಜರೀಗಿಡಗಳು (ಫರ್ನ್), ಪಾಚಿ, ಸಮುದ್ರ ಕಳೆ ಮುಂತಾದವನ್ನು
ಕೂಡ ಸಂಕಲಿಸ ಬಹುದು. ನೀವು ಸಂರಕ್ಷಿಸಲು ಇಚ್ಛಿಸುವ ಯಾವುದಾದರೊಂದು ಸಸ್ಯವನ್ನು ಆರಿಸಿಕೊಳ್ಳಿ.
• ನೀವು ಆರಿಸಿದ ಸಸ್ಯ ಭಾಗದ ಎಲ್ಲಾ ರೂಪ ರಚನೆಗಳೂ ಕಾಣುವಂತೆ ಒಣಗಿದ ನಮೂನೆಗಳನ್ನು
ತಯಾರಿಸಿ. ಉದಾಹರಣೆಗೆ, ಒಂದೇ ಸಸ್ಯದ ಎರಡು ಎಲೆಗಳನ್ನು ತೆಗೆದುಕೊಂಡು, ಒಂದು ಎಲೆಯ ಮುಂಭಾಗ ಮತ್ತು ಇನೊಂದು ಎಲೆಯ ಹಿಂಭಾಗ ಮೇಲೆ ಕಾಣುವಂತೆ ಬೇರೆ ಬೇರೆಯಾಗಿ ಜ�ೋಡಿಸಿ. ಯಾವುದೇ ಸಸ್ಯದ ಎಲೆಯ ಅಧ್ಯಯನಕ್ಕೆ ಅದರ ಎರಡೂ ಭಾಗಗಳ ನ�ೋಟ ಬಹು ಮುಖ್ಯ.
• ಎಲ್ಲಾ ಮಾಹಿತಿಗಳನ್ನೂ ಅದರ ಅಡಿಯಲ್ಲಿ ಬರೆದಿಡಿ. ಯಾರು, ಎಲ್ಲಿಂದ, ಆ ಸಸ್ಯವನ್ನು ಸಂಗ್ರಹಿಸಿದರು,
ಸಸ್ಯದ ಹೆಸರು, ಮುಂತಾದವನ್ನು ಅಂಕಿತಗೊಳಿಸಿ. ಹೀಗೆ ಅದು ಕೇವಲ ಕಲೆಯ ವಸ್ತುವಾಗಿರದೆ ವೈಜ್ಞಾನಿಕ ಮೂಲ್ಯವನ್ನೂ ಪಡೆಯುತ್ತದೆ.
ಸರಿಯಾದ ಎಚ್ಚರಿಕೆ ಮತ್ತು ಗಮನದಿಂದ, ಒತ್ತಿ ಒಣಗಿಸಿ ಸಂಗ್ರಹಿಸಿದ ಸಸ್ಯ ನಮೂನೆಗಳು ನೂರಾರು ವರ್ಷಕಾಲ ಬಾಳುತ್ತವೆ. ಹರ್ಬೇರಿಯಾ (ಒಣ ಸಸ್ಯ ಸಂಕಲನ), ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ವೈಜ್ಞಾನಿಕ ಜ್ಞಾನವನ್ನು ಪಸರಿಸಲು ಬಹು ಮುಖ್ಯ ಪಾತ್ರ ವಹಿಸುತ್ತವೆ.
ಬೆಂಗಳೂರು ವಿಜ್ಞಾನ ವೇದಿಕೆ
14
15
ಫೈಟ�ೋಪಿಯ 2020
ಜೀವನ ಬುದ್ಬುದ ಟೆರೇರಿಯಮ್(ಸಸ್ಯಾಲಯ) ಎಂಬ ಅದ್ಭುತ ತಾಣ
ಬೆಂಗಳೂರು ವಿಜ್ಞಾನ ವೇದಿಕೆ
16
ಸಸ್ಯಗಳು, ಪ್ರಾಣಿಗಳು ಮತ್ತು ಬೇರೆ ಹಲವಾರು ಜೀವಿಗಳು, ಜೀವ ಕಣಗಳು, ಭೂಮಿ, ವಾತಾವರಣ , ನೀರು, ಹವಾಮಾನ ಮುಂತಾದ ಹಲವು ಸಜೀವ-ನಿರ್ಜೀವ ತತ್ವಗಳು ಒಂದು ಭೂ-ಪ್ರದೇಶದಲ್ಲಿ ಸೇರಿ ಜೀವ ಪರಿಸರದ ಸೃಷ್ಠಿಯಾಗುತ್ತದೆ. ಸಜೀವ ಅಂಶಗಳು ಅಂದರೆ ಸಸ್ಯಗಳು, ಪ್ರಾಣಿಗಳು, ಕೀಟಗಳು, ಆಲ್ಗೇ ಮುಂತಾದವು, ನಿರ್ಜೀವ ತತ್ವಗಳು -ಬಂಡೆ ಕಲ್ಲುಗಳು, ಬೆಳಕು, ನೀರು ಮತ್ತು ತಾಪಮಾನ ಇತ್ಯಾದಿ. ಜೀವ ಪರಿಸರದ ಪ್ರತಿಯೊಂದು ಅಂಶವೂ ಒಂದನ್ನೊಂದು ಅವಲಂಬಿಸಿವೆ. ಉದಾಹರಣೆಗೆ, ತಾಪಮಾನದ ಏರುಪೇರು, ಒಂದು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ನಂತರ ಆ ಸಸ್ಯಗಳನ್ನು ಸೇವಿಸುವ ಪ್ರಾಣಿಗಳ ಮೇಲೂ ಸಮಾನ ಪರಿಣಾಮ ಕಂಡುಬರುತ್ತದೆ. ಆ ಸಂದರ್ಭದಲ್ಲಿ, ಪ್ರಾಣಿಗಳು ಆ ಬಗೆಯ ಸಸ್ಯಗಳನ್ನು ಹುಡುಕುತ್ತಾ ಇನ್ನೊಂದು ಪ್ರದೇಶಕ್ಕೆ ವಲಸೆ ಹ�ೋಗಬೇಕು ಇಲ್ಲವೇ ನಶಿಸುತ್ತವೆ. ಜೀವ ಪರಿಸರವು ಒಂದು ಸಣ್ಣ ಹಳ್ಳವಾಗಿರಬಹುದು, ಇಲ್ಲವೇ ಬೃಹತ್‌ಗಾತ್ರದ ಸಾಗರವಿರ ಬಹುದು. ಭೂಮಿಯ ಮೇಲ್ಮೈ ಭಾಗವು ಅನೇಕ ಜೀವ ಪರಿಸರಗಳನ್ನು ಹೊಂದಿದೆ. ಕಾಡುಗಳು, ನದಿಗಳು, ಮರುಭೂಮಿ, ಸಾಗರಗಳು ದೊಡ್ಡ ಗಾತ್ರದ ಜೀವ ಪರಿಸರ ಸಂಕುಲಗಳು. ಪ್ರತಿಯೊಂದು ಜೀವ ಪರಿಸರ ಸಂಕುಲಗಳು, ಆ ಭೂ ಪ್ರದೇಶಕ್ಕೆ ಹೊಂದುವ, ಅಲ್ಲಿಗೇ ವಿಶಿಷ್ಟವಾದ ಹಲವು ಸಜೀವ-ನಿರ್ಜೀವ ತತ್ವಗಳ ಸಮಾಗಮವನ್ನು ಹೊಂದಿರುತ್ತವೆ. ಒಂದೇ ರೀತಿಯಲ್ಲಿ ಕಾಣುವ ಎಷ್ಟೋ ಜೀವ ಪರಿಸರ ಸಂಕುಲಗಳು ಸಂಪೂರ್ಣವಾಗಿ ಬೇರೆ ಬೇರೆ ಜೀವ ಪರಿಸರದಿಂದ ಕೂಡಿರ ಬಹುದು. ಉದಾಹರಣೆಗೆ, ಭಾರತದ ಥಾರ್ ಮರುಭೂಮಿಯಲ್ಲಿರುವ ಜೀವ ಪರಿಸರ ಸಂಕುಲವು, ಚೀನಾ ಮತ್ತು ಮಂಗ�ೋಲಿಯಾದ ಗ�ೋಬಿ ಮರುಭೂಮಿಯಲ್ಲಿರುವ ಜೀವ ಪರಿಸರ ಸಂಕುಲದಿಂದ ವಿಭಿನ್ನವಾಗಿದೆ. ಹವಾಮಾನ ವ್ಯತ್ಯಾಸಗಳಿಂದಾಗಿ ಜೀವ ಪರಿಸರ ಸಂಕುಲಗಳು ಪ್ರಭಾವಗೊಂಡು ಸತತವಾಗಿ ಬದಲಾಗುತ್ತವೆ. ಸಾವಿರಾರು ವರ್ಷಗಳ ಹಿಂದೆ ಇಡೀ ಅನ್ಟಾರ್ಟಿಕಾ ಹಸಿರಿನಿಂದ ಕಂಗೊಳಿಸುತ್ತಿತ್ತು, ಉತ್ತರ ಆಫ್ರಿಕಾದಲ್ಲಿ ಹಸಿರು ಭೂಭಾಗಳಿದ್ದು ನದಿಗಳು ಹರಿಯುತ್ತಿದ್ದವು.
17
ಫೈಟ�ೋಪಿಯ 2020
ಕೆಲವು ಸಸ್ಯಗಳು ಮತ್ತು ಬೆಳಕಿನ ಸಹಾಯದಿಂದ, ಗಾಜಿನ ಒಂದು ಜಾಡಿಯಲ್ಲಿ ಸಣ್ಣ ಪರಿಸರವನ್ನು ಸೃಷ್ಟಿ ಮಾಡಬಹುದು. 1892 ರಲ್ಲಿ ಬ್ರಿಟಿಷ್ ವೈದ್ಯರು ಮತ್ತು ನಿಸರ್ಗವಾದಿ, ನಾಥೇನಿಯಲ್‌ವಾರ್ಡ್, ಗಾಜಿನ ಮುಚ್ಚಲ ಹೊಂದಿರುವ ಮರದ ಪೆಟ್ಟಿಗೆಯನ್ನು ಬಳಸಿಕೊಂಡು ಇಂತಹ ಪರಿಸರವನ್ನು ಸೃಷ್ಟಿಸಿದರು. ಇದರಲ್ಲಿ ಸಸ್ಯಗಳು ಬೆಳೆದು,ಬಹು ಕಾಲ ಬಾಳಿದವು. ಒಂದು ಗಾಜಿನ ಬಾಟಲಿಯಲ್ಲಿ ಸ್ವಲ್ಪ ಮಣ್ಣು ತುಂಬಿ , ಕೆಲವು ಪ್ರಕಾರದ ಸಸಿಗಳನ್ನು ನೆಟ್ಟು , ನೀರೆರೆದು, ಚಿಟ್ಟೆಯ (ಸಣ್ಣ ಹುಳು) ಗೂಡನ್ನು, ಅದರಲ್ಲಿ ಇರಿಸಿ ಮುಚ್ಚಿದರು. ಗಾಜಿನ ಒಳ ಭಾಗದಲ್ಲಿ ಹಬೆ ಸುತ್ತಿಕೊಂಡು, ನೀರಿನ ಕಣಗಳಾಗಿ ಮೂಡಿ ಮತ್ತೆ ಮಣ್ಣಿಗೆ ಹನಿದವು. ಗಾಜಿನ ಮೂಲಕ ಬೆಳಕು ಹರಿದು ಗಿಡಗಳು ಬೆಳೆದವು. ಇವು ಮೂರು ವರ್ಷಕಾಲ ಕದಲದೇ ಹಾಗೇ ಜೀವಂತವಾಗಿದ್ದವು. Wardian Case
ಹೇಗೆ ಇಂತಹ ಸ್ಥಿತಿ ಗತಿಗಳು ಗಿಡಗಳು ಬೆಳೆಯಲು ಸಹಾಯಕವಾಗಿವೆ ಎಂಬುದನ್ನು ಅರಿತು ವಾರ್ಡಿಯನ್‌ಕೇಸ್‌ನಿರ್ಮಾಣವಾಯಿತು. ವಿಶ್ವದಾದ್ಯಂತ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಸ್ಯಗಳನ್ನು ಕೊಂಡೊಯ್ಯುವಲ್ಲಿ ಸಹಾಯಕವಾಗಿದೆ. ಪ್ರಸಕ್ತ ಟೆರ್ರೆರಿಯಮ್‌ಎಂದು ಕರೆಯುವ ವ್ಯವಸ್ಥೆಯ ಮೂಲರೂಪ ವಾರ್ಡಿಯನ್ ಕೇಸ್. ಟೆರ್ರೇರಿಯಮ್‌ನಿರ್ಮಿಸಿ, ಗಮನಿಸಿದರೆ, ಪರಿಸರದ ಸಜೀವ- ನಿರ್ಜೀವ ತತ್ವಗಳ ಪರಸ್ಪರ ಒಡಂಬಡಿಕೆ ಜೀವ ಪ್ರಕ್ರಿಯೆ ಸಣ್ಣ ಪರಿಸರದಲ್ಲಿಯೂ ಜೀವ ಸೃಷ್ಟಿಯನ್ನು ಅರಿಯಲು ಅನುಕೂಲಕರ. Wardian Case
ಬೆಂಗಳೂರು ವಿಜ್ಞಾನ ವೇದಿಕೆ
18
ನಾಥೇನಿಯಲ್‌ಬಾಗ್ ಶಾ ವಾರ್ಡ್, ಲಿಥ�ೋಗ್ರಾಫ್- ಆರ್.ಜೆ.ಲೇನ್, ಜೆ.ಪಿ.ನೈಟ್ ವೆಲ್ಲಕಮ್‌ಗ್ರಂಥಾಲಯ, ಲಂಡನ್, ವೆಲ್ಲಕಮ್‌ಚಿತ್ರಗಳು
19
ಫೈಟ�ೋಪಿಯ 2020
ನಿಮ್ಮದೇ ಟೆರ್ರೇರಿಯಮ್(ಸಸ್ಯಾಲಯ) ಸೃಷ್ಟಿಸಿ ಟೆರ್ರೇರಿಯಮ್‌ಒಂದು ಬಗೆಯ ಸ್ವ-ಪರಿಪೂರ್ಣ ಜೀವ ಪರಸರ. ಈ ವ್ಯವಸ್ಥೆಯಲ್ಲಿ, ವಿಶೇಷ ಕಾಳಜಿ ಅಥವಾ ಹಸ್ತಕ್ಷೇಪ ಇಲ್ಲದೆಯೇ ಪ್ರತಿ ಜೀವಿಯೂ ಜೀವನ ನಿರ್ವಹಣೆ ಮಾಡುತ್ತದೆ. ಜೀವ ಪ್ರಕ್ರಿಯೆಯನ್ನು ಅರಿತು ಈ ವಿಷಯದಲ್ಲಿ ಹಿಡಿತ ಕಂಡುಕೊಂಡರೆ ಸುಲಭವಾಗಿ ನಿಮ್ಮದೇ ಟೆರ್ರೇರಿಯಮ್(ಸಸ್ಯಾಲಯ) ನಿರ್ಮಿಸ ಬಹುದು. ಸಸ್ಯಾಲಯಗಳು ಕಲೆ ಮತ್ತು ವಿಜ್ಞಾನದ ಸುಂದರ ಸಮ್ಮಿಲನ.
ಬೇಕಾಗುವ ಸಾಮಗ್ರಿಗಳು ಮುಚ್ಚಳ ಸಹಿತ ಗಾಜಿನ ಹೂಜಿ/ಕುಂಡ/ ಮಡಕೆ ಸಣ್ಣ ಕಲ್ಲುಗಳು ಇದ್ದಲು ಮಣ್ಣು ಸಸ್ಯಗಳು ಮತ್ತು ನೀರು
ಬೆಂಗಳೂರು ವಿಜ್ಞಾನ ವೇದಿಕೆ
20
ಏನು ಮಾಡಬೇಕು • ಸ್ವಚ್ಛವಾದ ಒಂದು ಗಾಜಿನ
ಮಡಕೆಯನ್ನು ಆರಿಸಿಕೊಳ್ಳಿ. ಸ್ವಚ್ಚ ಮಾಡಲು ಯಾವುದೇ ರಾಸಾಯನಿಕವನ್ನೂ ಬಳಸಬಾರದು. ಸಣ್ಣ ಕಲ್ಲುಗಳನ್ನು ಅದರೊಳಗೆ ಹಾಕಿ ನೀರು ಸುಲಭವಾಗಿ ಕಲ್ಲುಗಳ ಮಧ್ಯ ಹರಿದು ಕೆಳಭಾಗದಲ್ಲಿ ನಿಲ್ಲುತ್ತದೆ. ಬೇಗನೆ ಆವಿಯಾಗುವುದಿಲ್ಲ. ಅದರ ಮೇಲೆ ಇದ್ದಿಲನ್ನು ಹರಡಿ. ನೀರಿನ ಕಲ್ಮಷವನ್ನು ಇದ್ದಿಲು ಹೀರಿಕೊಳ್ಳುತ್ತದೆ. ಹೀಗಾಗಿ ಗಾಜಿನೊಳಗಿನ ಜೀವ ಪರಿಸರ ಶುದ್ಧವಾಗಿ ಸ್ವಸ್ಥವಾಗಿ ಇರುತ್ತದೆ.
• ಈಗ ಸಾಕಷ್ಟು (ಗಿಡ ಬೆಳೆಯಲು
ಬೇಕಾಗವಷ್ಟು) ಮಣ್ಣನ್ನು ಗಾಜಿನ ಪಾತ್ರೆಯೊಳಗೆ ತುಂಬಿ. ಸಹಜ ಮಣ್ಣಿನಲ್ಲಿ, ಎಲ್ಲಾ ಪೌಷ್ಟಿಕಾಂಶಗಳು ಇರುತ್ತವೆ. ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು ಮತ್ತು ಬೂಷ್ಟು, ಗಿಡ ಬೆಳೆಯಲು ಸಹಕಾರಿ. ಸಾಕಷ್ಟು ಪ್ರಮಾಣದಲ್ಲಿ ಎರೆಹುಳು ಇದ್ದರೆ, ಮಣ್ಣಿನ ಗುಣಮಟ್ಟ ಉತ್ತಮವಾಗಿರುತ್ತದೆ.
• ಸಸ್ಯಗಳನ್ನು ಬಳಸಿ ಸಸ್ಯಾಲಯ ನಿರ್ಮಿಸಲು ಪ್ರಾರಂಭಿಸಿ. ಗಿಡಗಳನ್ನು ಕೊಂಡು ತಂದಿದ್ದರೆ, ಅವುಗಳ
ಉದ್ದ ಬೇರನ್ನು ತುಂಡರಿಸಿ, ನೀರೆರೆಯಿರಿ. ಸಸ್ಯಾಲಯದ ಮಣ್ಣನ್ನು ಚಮಚದಿಂದ ಕೆದಕಿ, ಸಣ್ಣ ತೂತುಗಳನ್ನು ತ�ೋಡಿ ಅದರಲ್ಲಿ ಗಿಡ ನೆಟ್ಟು ಸುತ್ತಲೂ ಮಣ್ಣು ಮುಚ್ಚಿ. ಗಾಜಿನ ಕುಂಡವನ್ನು ಮುಚ್ಚಳದಿಂದ ಮುಚ್ಚಿ.
• ಸಾಕಷ್ಟು ಬಿಸಿಲು ಇರುವ ಕಡೆ ಸಸ್ಯಾಲಯವನ್ನು ಇರಿಸಿ. ಆಗಾಗ ಗಮನಿಸಿ. ಗಿಡಗಳು ಒಣಗಿದಂತೆ ಕಂಡರೆ
ಸ್ವಲ್ಪ ಕಡಿಮೆ ಬಿಸಿಲಿರುವ ಜಾಗಕ್ಕೆ ಸ್ಥಳಾಂತರಿಸಿ. ಗಿಡಗಳು ಬೆಳೆಯಲು ಸ್ವಲ್ಪ ನೀರು ಹಾಕಿ. ತೇವಾಂಶ ಹೆಚ್ಚು ಎನಿಸಿದರೆ, ಗಾಳಿಯಾಡಲು ಬಿಡಿ.
21
ಫೈಟ�ೋಪಿಯ 2020
ಗಮನ ಹರಿಸ ಬೇಕಾದ ವಿಷಯಗಳು • ಮಣ್ಣಿನ ಪ್ರಕಾರವು ಬದಲಾದಂತೆಲ್ಲಾ ಬೇರೆ ಬೇರೆ ಬಗೆಯ ಗಿಡಗಳನ್ನು ಬೆಳೆಯ ಬಹುದು.
ಉದಾಹರಣೆಗೆ, ನೀವು ನಿಮ್ಮ ಸಸ್ಯಾಲಯದಲ್ಲಿ ಬೆಳೆಯಲು ಕ್ಯಾಕಟಸ್‌ನಂತಹ ಗಿಡಗಳನ್ನು ಆರಿಸಿದ್ದರೆ, ಮಣ್ಣಿನಲ್ಲಿ ಹೆಚ್ಚು ಮರಳಿನ ಅಂಶ ಇರಬೇಕು. ತೇವಾಂಶ ಕಡಿಮೆ ಇರಬೇಕು. ನೀರು ನಿಲ್ಲಬಾರದು. ಇಲ್ಲವೇ ಕ್ಯಾಕಟಸ್‌ಬೇರು ಕೊಳೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಾಜಿನೊಳಗೆ ಮಣ್ಣಿನಲ್ಲಿ ಹೆಚ್ಚು ಮರಳಿನ ಅಂಶ ಇರಬೇಕು. ಆಗ ಗಿಡದ ಬೇರು ಸ್ವಸ್ಥವಾಗಿ ಬೆಳೆಯುತ್ತದೆ.
• ಒಂದೇ ಸಸ್ಯಾಲಯದಲ್ಲಿ ಹೆಚ್ಚು ಗಿಡಗಳನ್ನು ನೆಡಬೇಡಿ. ಹೆಚ್ಚು ಗಿಡಗಳು ಒಂದೇ ಕಡೆ ಬೆಳೆದರೆ
ಪೌಷ್ಟಿಕಾಂಶದ ಕೊರತೆಯಿಂದ ಬೇರು ಕೊಳತು ಗಿಡ ನಶಿಸಬಹುದು. ನಿಮ್ಮ ಸಸ್ಯಾಲಯದಲ್ಲಿ ಗಿಡಗಳು ವಿರಳವಾಗಿದ್ದರೆ ಚೆನ್ನಾಗಿ ಬೆಳೆಯುತ್ತವೆ. ತರಾವರಿ ಸಸ್ಯಗಳಿಗೆ ಬೇರೆ ಬೇರೆ ಗಾಜಿನ ಪಾತ್ರೆಗಳನ್ನು ಬಳಸಿ.
• ನೀವು ನಿಮ್ಮ ಸಸ್ಯಾಲಯದಲ್ಲಿ ಬೆಳೆದ ಗಿಡಗಳು ವಿವಿಧ ಪ್ರಾಕೃತಿಕ ಸ್ಥಿತಿಗೆ (ಗಾಳಿ, ಬೆಳಕು, ನೀರಿನ
ಪ್ರಮಾಣದಲ್ಲಿ ಏರುಪೇರು) ಹೇಗೆ ಸ್ಪಂದಿಸುತ್ತವೆ ಎಂದು ಅರಿಯಲು, ಒಂದೇ ಬಗೆಯ ಗಿಡಗಳನ್ನು ಒಂದೇ ಪ್ರಕಾರದ ಮಣ್ಣು ತುಂಬಿದ ಮೂರು–ನಾಲ್ಕು ಸಸ್ಯಾಲಯಗಳಲ್ಲಿ, ನೆಟ್ಟು ಬೆಳೆಸಿ. ಅವನ್ನು ಬೇರೆ ಬೇರೆ ಜಾಗದಲ್ಲಿ ಇಡಿ. ಉದಾಹರಣೆಗೆ ಪ್ರತಿಯೊಂದಕ್ಕೆ ಒದಗಿಸುವ ನೀರಿನ ಪ್ರಮಾಣದಲ್ಲಿ ಬದಲಾವಣೆ ಮಾಡಿ. ಎಷ್ಟು ನೀರನ್ನು ಹಾಕಿದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ ಎಂದು ಹಲವಾರು ದಿನ ಗಮನಿಸಿ ಅರಿತು ಕೊಳ್ಳಿ. ಹೀಗೆ ಒಂದು ಬಗೆಯ ಗಿಡದ ಉತ್ತಮ ಬೆಳವಣಿಗೆಗೆ ಎಷ್ಟು ಗಾಳಿ, ಬೆಳಕು, ಬೇಕು, ಯಾವ ಪ್ರಕಾರದ ಮಣ್ಣು ಬೇಕು ಎಂಬುದನ್ನು ಸಹ ಅರಿತುಕೊಳ್ಳ ಬಹುದು.
ಬೆಂಗಳೂರು ವಿಜ್ಞಾನ ವೇದಿಕೆ
22
ನಿಮ್ಮದೇ ಟೆರ್ರೇರಿಯಮ್(ಸಸ್ಯಾಲಯ) ಸೃಷ್ಟಿಸಿ ಈ ಕೆಳಗಿನ ಹ್ಯಾಶ್ ಟ್ಯಾಗ್‌ಬಳಸಿ #ExperimentWithSGB and #Phytopia ನಮ್ಮೊಂದಿಗೆ ನೀವು ನಿರ್ಮಿಸಿದ ಸಸ್ಯಾಲಯದ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. @SciGalleryblr
23
ಫೈಟ�ೋಪಿಯ 2020
ಸುಗಂಧ ಮತ್ತು ಬಣ್ಣಗಳು ಸಸ್ಯಕುಲ ಪರಾಗ ಸ್ಪರ್ಷ ಕ್ರಿಯೆಗೆ ಹೇಗೆ ಅಣಿಯಾಗುತ್ತದೆ – ಕೀಟಗಳನ್ನು, ಹಕ್ಕಿಗಳನ್ನು, ಆಕರ್ಷಿಸುತ್ತದೆ
ಬೆಂಗಳೂರು ವಿಜ್ಞಾನ ವೇದಿಕೆ
24
ಉದ್ಯಾನ ವನಗಳಲ್ಲಿ ಸುತ್ತು ಹಾಕಿದರೆ, ಅಲ್ಲಿ ಹೂವುಗಳ ಬಗೆಬಗೆಯ ಬಣ್ಣಗಳು, ಮತ್ತು ಹೊರ ಹೊಮ್ಮುವ ಸುಗಂಧ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಈ ಬಗೆ ಬಗೆಯ ಹೂವುಗಳು ರಂಗನ್ನು ಚೆಲ್ಲಿ ಶ್ರಾವಣ ಕವಿತೆಗಳಿಗೆ ಪ್ರೇರಣೆಯಾಗುವುದಲ್ಲದೇ ಪರಾಗ ಸ್ಪರ್ಷಕ್ಕೆ ಅನುಕೂಲವಾಗಲು ವಿವಿಧ ಕೀಟಗಳೂ ಮತ್ತು ಹಕ್ಕಿಗಳನ್ನು ತಮ್ಮ ವೈವಿಧ್ಯಮಯ ಬಣ್ಣ-ಸುವಾಸನೆಯಿಂದ ಆಕರ್ಷಿಸುತ್ತವೆ. ಒಂದು ಹೂವಿನಿಂದ ಇನ್ನೊಂದು ಹೂವಿಗೆ ಕೀಟಗಳು, ದುಂಭಿಗಳು ರಸ ಹೀರುತ್ತಾ ಹಾರಿದಂತೆಲ್ಲಾ ಪರಾಗವನ್ನು ಪಸರಿಸುತ್ತವೆ, ಸಸ್ಯಕುಲ ಸರಾಗವಾಗಿ ಫಲವತ್ತಾಗಲು ಅಣಿಮಾಡಿಕೊಡುತ್ತವೆ. ಈ ಸರಳ ರೂಪಗಳು, ಸಸ್ಯಗಳ ಪಳೆಯುಳಿಕೆಗಳಿಂದ, ಗ�ೋಚರಿಸುತ್ತವೆ. ಪ್ರತಿಯೊಂದು ಭೂ-ಪ್ರದೇಶಕ್ಕೆ ಸೀಮಿತವಾದ ಪ್ರಾಣಿ, ಪಕ್ಷಿ, ಕೀಟ ಸಂಕುಲಕ್ಕೆ ಅನುಗುಣವಾಗಿ, ಹೂವಿನ ಸಸ್ಯಗಳ ಬಣ್ಣ ಮತ್ತು ಸುಗಂಧ ರಚನೆ ವಿಕಸನಗೊಂಡಿದೆ ಎಂಬುದು ಸಂಶ�ೋಧನೆಯಿಂದ ತಿಳಿದುಬಂದಿದೆ. ಪ್ರಪಂಚದೆಲ್ಲೆಡೆ ಜೇನು ಹುಳುವಿನ ಸಾರಿರಾರು ತಳಿಗಳು ಇದ್ದರೂ, ಎಲ್ಲಾ ತಳಿಗಳ ಜೇನುಹುಳುವಿನ ಕಣ್ಣುಗಳು, ಅತಿನೇರಳೆ, ನೀಲಿ ಮತ್ತು ಹಸಿರು ಬಣ್ಣಗಳಿಗೆ ಸ್ಪಂದಿಸುತ್ತವೆ. ಹೂವುಗಳಲ್ಲಿ ಅತಿ-ನೇರಳೆ ವರ್ಣ ಅಡಗಿರುತ್ತದೆ. ಕೆಲವು ಹೂವುಗಳು ಜೇನು ಹುಳುವನ್ನು ಆಕರ್ಷಿಸುವ ರಸ ಸೂಚಕ ರಂದ್ರಗಳನ್ನು ಹೊಂದಿರುತ್ತವೆ. ಈ ಅಗ�ೋಚರ ಸೂಚಕಗಳಿಂದ ಸ್ರವಿಸಿದ ರಸ ಗಂಧವು, ಜೇನುಹುಳಕ್ಕೆ ಎಲ್ಲಿ ಹೇರಳವಾಗಿ ರಸ ಲಭ್ಯವಿದೆ ಎಂದು ತ�ೋರುತ್ತವೆ. ದುಂಬಿಗಳಿಗೆ ಹೆಚ್ಚು ಕಾಣದಿದ್ದರೂ ಸಸ್ಯಗಳಿಂದ ಹೊರಹೊಮ್ಮುವ ಸುಗಂಧವನ್ನು ಅನುಸರಿಸಿ ಹೂವಿನ ರಸ ಹೀರುತ್ತವೆ. ವಿವಿಧ ಕಾರಣಗಳಿಂದ ಸಸ್ಯಗಳು ಸುಗಂಧ ಬೀರುತ್ತವೆ. ಪರಾಗ ಸ್ಪರ್ಷಕ್ಕೆ ಕೀಟಗಳನ್ನು ಆಕರ್ಷಿಸಲು, ಬೇರೆ ಸಸ್ಯಗಳೊಂದಿಗೆ ಸಂಪರ್ಕ ಮಾಧ್ಯಮವಾಗಿ , ಮತ್ತು ಕೆಲವು ಸಂದರ್ಭದಲ್ಲಿ, ಬೇಟೆಯನ್ನು ಆಕರ್ಷಿಸಲು ಸಹ ವರ್ಣರಂಜಿತವಾಗಿ ಸುಗಂಧಯುಕ್ತವಾಗಿ ಬೆರಗು ಮೂಡಿಸುತ್ತವೆ. ಒಂದೇ ಬಣ್ಣ ಮತ್ತು ಸುಗಂಧ ಸೂಸುವ ಹೂವುಗಳಂತೆ ಕಂಡರೂ ಪ್ರತಿಯೊಂದು ತಳಿಯ ಹೂವೂ ತನ್ನದೇ ಬಣ್ಣ ಮತ್ತು ಸುಗಂಧ ಪ್ರಕಾರವನ್ನು ವಿಶಿಷ್ಟವಾಗಿ ಹೊಂದಿರುತ್ತದೆ. ನೂರಾರು ರಾಸಾಯನಿಕ ಸಮ್ಮಿಶ್ರಣಗಳು ಬಗೆ ಬಗೆಯ ಪ್ರಮಾಣದಲ್ಲಿ ಸೇರಿ ಈ ರೀತಿಯ ಪ್ರತ್ಯೇಕ ಸುಗಂಧ ಮತ್ತು ಬಣ್ಣಗಳ ರಚನೆಯಾಗಿರುತ್ತದೆ. ಈ ಸುಗಂಧ ಕಣಗಳು ಗಾಳಿಯಲ್ಲಿ ಬೆರೆತು ಕೀಟಗಳ ಉಸಿರಾಡುವ ಅಂಗಗಳನ್ನು ಸೇರಿ ಅವುಗಳನ್ನು ತಮ್ಮಲ್ಲಿಗೆ ಆಕರ್ಷಿಸುತ್ತವೆ. ಕೆಲವು ಹೂವುಗಳು ಸಾಮಾನ್ಯವಾಗಿ ವಿವಿಧ ಬಗೆಯ ಕೀಟಗಳನ್ನು ತಮ್ಮಲ್ಲಿಗೆ ಆಕರ್ಷಿಸುತ್ತವೆ. ಮತ್ತೆ ಕೆಲವು, ನಿರ್ದಿಷ್ಟ ಬಗೆಯ ಕೀಟಗಳನ್ನು ಮಾತ್ರ ಆಕರ್ಷಿಸುತ್ತವೆ. ಸಸ್ಯ ಕುಲದ ಈ ಸುಗಂಧಗಳು, ಬಣ್ಣಗಳು ನಾವು ಸವಿಯಲು ಮಾತ್ರವಲ್ಲದೇ, ಕೀಟ, ಪಕ್ಷಿ ಸಂಕುಲಗಳನ್ನು ಆಕರ್ಷಿಸಿ ಪರಾಗ ಸ್ಪರ್ಷಕ್ರಿಯೆಯ ಪೂರ್ತಿಗಾಗಿ, ಸಸ್ಯಸಂಕುಲದ ಪಸರಣೆ, ಉಳಿವಿಗಾಗಿ ಎಂದು ನಾವು ಅರಿತುಕೊಳ್ಳಬೇಕು.
25
ಫೈಟ�ೋಪಿಯ 2020
ಸುಗಂಧ-ಪರಿಮಳ ಇತಿಹಾಸದ ಪ್ರಕಾರ, ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಪರ್ಷಿಯಾದ ವೈದ್ಯರಾದ ಇಬನ್‌ಸಿನಾ, ಗುಲಾಬಿಯಿಂದ ಸುಗಂಧದ ಎಣ್ಣೆಯನ್ನು ಹಿಂಡಿ ತಯಾರಿಸುವ ಬಗೆ ಅರಿತಿದ್ದರು. ಅವರು ಬಿಸಿ ನೀರಿನ ಹಂಡೆಯಲ್ಲಿ ಹೂವುಗಳನ್ನು ಹಾಕುತ್ತಿದ್ದರು. ಇದರಿಂದ ಸುಗಂಧದ ಎಣ್ಣೆಯ ಆವಿಯು ಸೃಷ್ಟಿಯಾಗುತ್ತಿತ್ತು. ಈ ಮಿಶ್ರಣ ಸಾಕಷ್ಟು ಇಂಗಿದ ನಂತರ ನೀರಿನ ಮೇಲೆ ತೇಲುತಿದ್ದ ತೈಲವನ್ನು ಸಂಗ್ರಹಿಸುತ್ತಿದ್ದರು. ಪ್ರಪಂಚದ ಕೆಲವು ಕಡೆಗಳಲ್ಲಿ, ಸುಗಂಧವನ್ನು ತೈಲ ರೂಪದಲ್ಲಿ ಬಳಸುತ್ತಾರೆ. ಆಧುನಿಕ ಯುಗದಲ್ಲಿ, ಆಲ್ಕೋಹಾಲ್‌ಮಿಶ್ರಿತ ಸುಗಂಧ ಬಳಕೆಯಾಗುತ್ತಿದೆ. ಇದು ಗಾಳಿಯಲ್ಲಿ ಸುಲಭವಾಗಿ ಬೆರೆಯುತ್ತದೆ. ಈಗಲೂ ನೈಸರ್ಗಿಕವಾಗಿ ಉತ್ಪನ್ನಗೊಳ್ಳುವ ಸುಗಂಧದ ತೈಲಗಳಲ್ಲಿ ಹಣ್ಣು, ಹೂವು, ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತವೆ, ಇವುಗಳ ಬೆಲೆ ಹೆಚ್ಚು. ಕಡಿಮೆ ಬೆಲೆಯ ಸುಗಂಧದಲ್ಲಿ ಕೃತಕ ರಾಸಾಯನಿಕಗಳನ್ನು ಬಳಸಲಾಗುತ್ತದೆ.
ನೀಲಿ ಗಿಡ (ಇಂಡಿಗ�ೋಫೆರ ಟಿಂಕ್ಟೋರಿಯ ಎಲ್.): ಹೂವು ಮತ್ತು ಹಣ್ಣನ್ನು ಬೇರೆ ಬೇರೆಯಾಗಿ ಬಣ್ಣಿಸಿರುವ, ಹೂವು ಬಿಟ್ಟಿರುವ ಕಾಂಡದ ದೃಶ್ಯ. ಬಣ್ಣದ ಕೆತ್ತನೆ: ಜೆ.ಜೆ. / ಜೆ.ಈ.ಹೈಡ್, ಸಿ. 1750 ಜಿ.ಡಿ.ಎಹ್ರೆಟ್‌ಕೃಪೆ ವೆಲ್ಲ್‌ಕಮ್‌ಸಂಗ್ರಹಣ
ಬೆಂಗಳೂರು ವಿಜ್ಞಾನ ವೇದಿಕೆ
ಭಾರತೀಯ ಸುಗಂಧ ಮಾರಾಟಗಾರರು – ಗೌಚೆ ಚಿತ್ರಾಕೃತಿ; ಕೃಪೆ ವೆಲ್ಲ್‌ಕಮ್‌ಸಂಗ್ರಹಣ
ರಂಗು-ಬಣ್ಣ ಹೂವುಗಳಿಂದ ಸುಗಂಧಗಳನ್ನು ತೆಗೆಯುವುದು ಅಷ್ಟೇ ಅಲ್ಲ, ಮಾನವರು, ಸಸ್ಯಗಳನ್ನು, ಕೀಟಗಳನ್ನು ಮತ್ತು ಖನಿಜಗಳನ್ನು ಬಣ್ಣ ತಯಾರಿಸಲು ಶತಮಾನಗಳಿಂದ ಬಳಸಿದ್ದಾರೆ. 1856 ರಕ್ಕೂ ಮೊದಲು, ಬ್ರಿಟಿಷ್ ರಾಸಾಯನಿಕ ಶಾಸ್ತ್ರಜ್ಞ ವಿಲಿಯಮ್‌ಪರ್ಕಿನ್ಸ್ ಮಲೇರಿಯಾಗೆ ನೈಸರ್ಗಿಕ ಪದಾರ್ಥಗಳಿಂದ ಔಷಧ ಕಂಡು ಹಿಡಿಯುವಾಗ ಅಕಸ್ಮಾತ್ತಾಗಿ “ಮಾವೈನ್ “ ಕೃತಕ ರಂಗನ್ನು ಸಂಶ್ಲೇಷಿಸಿದರು. ನೈಸರ್ಗಿಕ ಪದಾರ್ಥಗಳಿಂದ ರಂಗು ತಯಾರಿಸುವುದು ಸಾಮಾನ್ಯವಾಗಿತ್ತು. “ಇಂಡಿಗ�ೋ” ಅಂತಹುದೇ ಗಾಢ , ಸಿರಿಸಂಪನ್ನ ರಂಗು. ಇಂಡಿಯ ಪದದ ಲ್ಯಾಟಿನ್‌ಸಮಾನಾಂತರ “ಇಂಡಿಗ�ೋ”. ಈ ಬಣ್ಣವನ್ನು ಮೂಲತಃ ಭಾರತದಿಂದ ಯೂರ�ೋಪ್‌ಗೆ ಆಮದು ಮಾಡಿಕೊಳ್ಳುತ್ತಿದ್ದ ಕಾರಣ, ಈ ಬಣ್ಣಕ್ಕೆ ಇಂಡಿಗ�ೋ ಹೆಸರು ನಿಂತಿದೆ. ಭಾರತ ಮತ್ತು ದಕ್ಷಿಣ ಅಮೇರಕದಲ್ಲಿ ಹೇರಳವಾಗಿ ಬೆಳೆಯುವ ನೀಲಿಪುಷ್ಪ ಇಲ್ಲವೇ ಅಜೂರ ನೀಲಿ ಹೂವುಗಳಲ್ಲಿ ದೊರೆಯುವ ರಾಸಯನಿಕಗಳನ್ನು ಬಳಸಿಕೊಂಡು ನೀಲಿ ಬಣ್ಣವನ್ನು ತಯಾರಿಸುತ್ತಾರೆ. 1882 ರಲ್ಲಿ ಯೂರ�ೋಪ್ ಪ್ರಾಂತ್ಯದಲ್ಲಿ ಕೃತಕ ನೀಲಿಯನ್ನು ಸೃಜಿಸುವ ಮುನ್ನ, ಅಜೂರ ನೀಲಿ ಗಿಡ ವಿಶೇಷವಾದ ವಾಣಿಜ್ಯ ಬೆಳೆಯಾಗಿತ್ತು. ನೀವು ಇಂದು ತೊಟ್ಟಿರುವ ಜೀನ್ಸ್‌ವಸ್ತ್ರದಲ್ಲಿ ಬಹುಶಃ ನೀಲಿ ಪುಷ್ಪದ ರಂಗು ಇರಬಹುದು.
26
ನೈಸರ್ಗಿಕ ಸುಗಂಧ ತೈಲ/ಅತ್ತರು ತಯಾರಿಸುವ ಬಗೆ
ತೈಲಗಳಲ್ಲಿ ಸಸ್ಯಗಳ ಜೀವ ಸತ್ವದ ಸಾರ ಅಡಕವಾಗಿರುತ್ತದೆ. ಸಾಬೂನು, ಅಂಗಮರ್ದನ (ಮೈತಿಕ್ಕುವ ಎಣ್ಣೆ) ಇಲ್ಲವೇ ತ್ವಚೆ ಲೇಪಕ ದ್ರಾವಣಗಳಲ್ಲಿ ಸುಗಂಧ ತೈಲಗಳನ್ನು ಬಳಸಬಹುದು. ನೈಸರ್ಗಿಕ ಸುಗಂಧ ತೈಲ ತಯಾರಿಸುವ ಬಗೆಯನ್ನು ಕಂಡುಕೊಳ್ಳಿ, ನಿಮ್ಮ ವಸ್ತ್ರಗಳ ಮೇಲೆ ಸಿಂಪಡಿಸಿಕೊಳ್ಳ ಬಹುದು, ಕ�ೋಣೆಯಲ್ಲಿ ಸಿಂಪಡಿಸಿ ಪರಿಮಳ ಪಡೆಯ ಬಹುದು. ಈ ಪ್ರಯೋಗದಲ್ಲಿ ಗುಲಾಬಿಯ ದಳ/ಪಕಳೆಗಳನ್ನು ಬಳಸುತ್ತಿದ್ದೇವೆ. ನೀವು ನಿಮಗೆ ಇಷ್ಟವಾದ ಸುಗಂಧ ಬೀರುವ ಸಸ್ಯವನ್ನು ಆರಿಸಿಕೊಳ್ಳ ಬಹುದು.
ಬೇಕಾಗುವ ಸಾಮಗ್ರಿಗಳು ಜಜ�ೋಬ ಇಲ್ಲವೇ ಆಲಿವ್‌ಎಣ್ಣೆ ಒಂದು ಬಟ್ಟಲು ಗುಲಾಬಿ ಹೂವಿನ ದಳ ಒರಳು ಕಲ್ಲು, ಘಾಡ ಗಾಜಿನ ಜಾಡಿ ನೀರು ಮತ್ತು ಶ�ೋಧಿಸುವ ವಂದರಿ
ಏನು ಮಾಡಬೇಕು • ನಾಲ್ಕು ಬಟ್ಟಲು ನೀರನ್ನು ಕುದಿಸಿ. • ಒಂದು ಬಟ್ಟಲು ತೈಲವನ್ನು ಜಾಡಿಯಲ್ಲಿ ಹಾಕಿ • ಗಾಜಿನ ಜಾಡಿಯನ್ನು ಬಿಸಿ ನೀರಿನಲ್ಲಿ ಇಡಿ.
ಬಿಸಿ ನೀರು ದಳ/ಪಕಳೆಗಳಿಂದ ಸುಗಂಧವನ್ನು ಹೀರಲು ಸಹಕಾರಿ.
• ಒರಳು ಕಲ್ಲಿನಲ್ಲಿ ಗುಲಾಬಿ ಹೂವಿನ ದಳ/
ಪಕಳೆಗಳನ್ನು ಚೆನ್ನಾಗಿ ಜಜ್ಜಿ/ತಿರುವಿಕೊಳ್ಳಿ
• ಹೀಗೆ ತಿರುವಿದ ಗುಲಾಬಿ ಪಕಳೆಗಳನ್ನು
ತೈಲವಿರುವ ಜಾಡಿಗೆ ವರ್ಗಾಯಿಸಿ, ಮುಚ್ಚಳದಿಂದ ಮುಚ್ಚಿಡಿ. ನೀರು ಆರಿದ ನಂತರ ಜಾಡಿಯನ್ನು ಬೇರೆಡೆಗೆ ಸಾಗಿಸಿ. • ಜಾಡಿಯ ತೈಲದಲ್ಲಿರುವ ಪಕಳೆಯನ್ನು ಕನಿಷ್ಟ ಒಂದು ದಿನ ಕದಲಿಸಬಾರದು. ಸುಗಂಧವು ಎಷ್ಟು
27
ಫಾಡವಾಗಿರಬೇಕು ಎಂಬುದರ ಮೇಲೆ ಏಳು ದಿನದ ವರೆಗೂ ಈ ಮಿಶ್ರಣವನ್ನು ಕದಲಿಸದೇ ಇಡಬಹುದು. • ಜರಡಿಯನ್ನು ಬಳಸಿ ಸುಗಂಧಿತ ತೈಲವನ್ನು ಬೇರ್ಪಡಿಸಿ ಗಾಜಿನ ಜಾಡಿಯಲ್ಲಿ ಸುರಕ್ಷಿಸಬಹುದು • ಈ ಪ್ರಕ್ರಿಯೆಯನ್ನು ಅನೇಕ ಬಾರಿ ಪುನರಾವರ್ತಿಸಿ
ಎಷ್ಟು ಬೇಕ�ೋ ಅಷ್ಟು ಸುಗಂಧ ತೈಲವನ್ನು ಪಡೆಯ ಬಹುದು. ಹೀಗೆ, ಸುಗಂಧ ತೈಲವನ್ನು ತಯಾರಿಸುವ ನಡುವೆ ಎಷ್ಟು ಕಾಲ ನೆನೆಸಿದರೆ ಎಷ್ಟು ಘಾಡವಾದ ತೈಲ ಪಡೆಯ ಬಹುದು ಎಂದು ಪ್ರಯೋಗ ಮಾಡ ಬಹುದು.
ಫೈಟ�ೋಪಿಯ 2020
ನೈಸರ್ಗಿಕ ರಂಗು/ಬಣ್ಣಗಳನ್ನು ತಯಾರಿಸುವ ವಿಧಾನ ಹಣ್ಣು ತರಕಾರಿಗಳ ಸಿಪ್ಪೆಯಿಂದ ಮನೆಯಲ್ಲಿಯೇ ಬಣ್ಣಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು ಹಣ್ಣು ತರಕಾರಿಗಳ ಸಿಪ್ಪೆ ನೀರು, ಚಿಕ್ಕ ತಟ್ಟೆ ಗಾಜಿನ ಜಾಡಿ ವಿನೇಗರ್‌ಮತ್ತು ಉಪ್ಪು
ಏನು ಮಾಡಬೇಕು • ಒಂದು ಬಟ್ಟಲು ಹಣ್ಣು ತರಕಾರಿಗಳ ಸಿಪ್ಪೆಯನ್ನು ಶೇಖರಿಸಿ. • ಸಿಪ್ಪೆಯನ್ನು ತಟ್ಟೆಗಳಲ್ಲಿ ಹಾಕಿ ಎರಡರಷ್ಟು ನೀರನ್ನು ಹಾಕಿಡಿ. ಒಂದು ಗಂಟೆಯವರೆಗೂ ಒಲೆಯ ಮೇಲೆ
ಅತಿ ಸಣ್ಣ ಉರಿಯಲ್ಲಿ ಕುದಿಯಲು ಇಡಿ.
• ತಣ್ಣಗಾಗುವವರೆಗೂ ಬಿಡಿ. • ಒಂದು ಗಾಜಿನ ಪಾತ್ರೆಯೊಳಗೆ ಈ ಬಣ್ಣದ ದ್ರಾವಣವನ್ನು ಶ�ೋಧಿಸಿಡಿ. ನೈಸರ್ಗಿಕ ಬಣ್ಣ ತಯಾರಾಗಿದೆ.
ಬಟ್ಟೆಗೆ ಬಣ್ಣ ಹಾಕಲು , ಸಂರಕ್ಷಕ/ಸ್ಥಿರೀಕರಣ ದ್ರಾವಣ ಬೆರೆಸ ಬೇಕಾಗುತ್ತದೆ. ಹಣ್ಣಿನ ಬಣ್ಣಗಳನ್ನು ಹಾಕಲು, ಬಟ್ಟೆಯನ್ನು ನಾಲ್ಕು ಬಟ್ಟಲು ನೀರಿನಲ್ಲಿ ಕಾಲು (1/4) ಬಟ್ಟಲು ಉಪ್ಪು ಬೆರೆಸಬೇಕು. ತರಕಾರಿಯ ಬಣ್ಣಗಳನ್ನು ಹಾಕಲು, ಬಟ್ಟೆಯನ್ನು ನಾಲ್ಕು ಬಟ್ಟಲು ನೀರಿನಲ್ಲಿ ಒಂದು (1) ಬಟ್ಟಲು ವಿನೇಗರ್‌ಬೆರೆಸಬೇಕು. ಈ ಮಿಶ್ರಣವನ್ನು ಕುದಿಸಿ ಆರಿಸಿ. ಬಟ್ಟೆಯನ್ನು ಈ ದ್ರಾವಣದಲ್ಲಿ ನೆನೆಸಿಡಿ. ನಿಮಗೆ ಬೇಕಾಗುವಷ್ಟು ಬಣ್ಣದ ಛಾಯೆಯನ್ನು ಬಟ್ಟೆಯ ಮೇಲೆ ಪಡೆಯಿರಿ.
ಬೆಂಗಳೂರು ವಿಜ್ಞಾನ ವೇದಿಕೆ
28
ವಿವಿಧ ಹಣ್ಣು-ಕಾಯಿ ಮತ್ತು ತರಕಾರಿಗಳನ್ನು ಬಳಸಿಕೊಂಡು ಸ್ವತಃ ಬಣ್ಣ ತಯಾರಿಸಿ • ಕೆಂಪು:ಬೀಟ್ರೂಟ್, ಕೆಂಪು ಈರುಳ್ಳಿ, ಚೆರ್ರಿ, ಸ್ಟ್ರಾ ಬೆರ್ರಿ, ರಾಸ್ಬೆರ್ರಿ • ಕಿತ್ತಳೆ: ಕ್ಯಾರೆಟ್,ಕಿತ್ತಳೆ ಹಣ್ಣಿನ ಸಿಪ್ಪೆ, ಈರುಳ್ಳಿ • ಹಳದಿ: ನಿಂಬೆ ಹಣ್ಣಿನ ಸಿಪ್ಪೆ, ಹಳದಿ ಸೇಬಿನ ಸಿಪ್ಪೆ • ಹಸಿರು: ಸೊಪ್ಪುಗಳು, ಹಸಿರು ಸೇಬಿನ ಸಿಪ್ಪೆ • ನೀಲಿ: ಎಲೆ ಕ�ೋಸು, ನೀಲಿ ಬೆರ್ರಿ, ನೇರಳೆ ಹಣ್ಣು • ನೇರಳೆ: ಕೆಂಪು ಈರುಳ್ಳಿ, ರಾಸ್ಬೆರ್ರಿ, ನೇರಳೆ ಹಣ್ಣು • ಗುಲಾಬಿ: ಬೀಟ್ರೂಟ್, ರಾಸ್ಬೆರ್ರಿ, ನೇರಳೆ ಹಣ್ಣು
29
ಫೈಟ�ೋಪಿಯ 2020
ನೀವು ತಯಾರಿಸಿದ ಬಣ್ಣಗಳನ್ನು ಇಲ್ಲಿ ಪ್ರಯೋಗಿಸಿ ಈ ಹ್ಯಾಶ್‌ಟ್ಯಾಗ್ #ExperimentWithSGB and #Phytopia ಬಳಸಿ , ಸಾಮಾಜಿಕ ಜಾಲತಾಣದ ಮೂಲಕ ನೀವು ತಯಾರಿಸಿರುವ ಬಣ್ಣಗಳ ಬಗೆಗೆ ಅನುಭವವನ್ನು ನಮೊಂದಿಗೆ ಹಂಚಿಕೊಳ್ಳಿ@SciGalleryBlr
ಬೆಂಗಳೂರು ವಿಜ್ಞಾನ ವೇದಿಕೆ
30
ನೀವು ಸುಗಂಧವನ್ನು ಹೇಗೆ ತಯಾರಿಸಿದಿರಿ ? ನೀವು ತಯಾರಿಸಿರುವ ಸುಗಂಧಗಳ ವಿವರಣೆಯನ್ನು ಈ ಬಗೆಯಲ್ಲಿ ಅಂಕಿತಗಳಿಸುವುದು ಉಪಯೋಗಕರ. (ಬಳಸಿದ ವಸ್ತುಗಳು ಮತ್ತು ಪ್ರಮಾಣ, ಸುಗಂಧದ ಸುವಾಸನೆ ಮುಂತಾದ್ದು)
ಸುಗಂಧ 2
ಸುಗಂಧ 1 ಹೆಸರು:
ಹೆಸರು:
ಬಳಸಿದ ವಸ್ತುಗಳು:
ಬಳಸಿದ ವಸ್ತುಗಳು:
ಬಣ್ಣ:
ಬಣ್ಣ:
ಪ್ರಮಾಣ:
ಪ್ರಮಾಣ:
ಘಾಡತೆ:
ಘಾಡತೆ:
ಸುಗಂಧ 3
31
ಸುಗಂಧ 4
ಹೆಸರು:
ಹೆಸರು:
ಬಳಸಿದ ವಸ್ತುಗಳು:
ಬಳಸಿದ ವಸ್ತುಗಳು:
ಬಣ್ಣ:
ಬಣ್ಣ:
ಪ್ರಮಾಣ:
ಪ್ರಮಾಣ:
ಘಾಡತೆ:
ಘಾಡತೆ:
ಫೈಟ�ೋಪಿಯ 2020
ಅಡಿಗೆಮನೆ ಔಷಧಾಲಯ ಅಡಿಗೆಮನೆಯ ಔಷಧೀಯ ಸಸ್ಯಗಳು
ಬೆಂಗಳೂರು ವಿಜ್ಞಾನ ವೇದಿಕೆ
32
ಬಹಳ ಹಿಂದಿನಕಾಲದಿಂದಲೂ, ಔಷದ ತಯಾರಿಕೆಯಲ್ಲಿ ಸಸ್ಯಗಳನ್ನು ಬಳಸಲಾಗುತ್ತಿದೆ. ಆಧುನಿಕ ಪ್ರಯೋಗಾಲಯಗಳಲ್ಲಿ, ಸಸ್ಯಗಳಿಂದ ಹಲವು ಬಗೆಯ ಸಾರವನ್ನು ಉತ್ಪಾದಿಸಿ ಜೀವ-ಉಳಿಸುವ ವಿವಿಧ ಔಷಧಗಳನ್ನು ತಯಾರಿಸುತ್ತಾರೆ. ಔಷಧಿ ಉದ್ಯಮದಲ್ಲಿ 100 ಕ್ಕೂ ಹೆಚ್ಚು ಸಕ್ರಿಯ ಉತ್ಪನ್ನಗಳನ್ನು ಸಸ್ಯಗಳಿಂದ ಪಡೆಯುತ್ತಿದ್ದಾರೆ. ಅಡಿಗೆಮನೆಯಲ್ಲಿ, ಅಡಿಗೆಗೆ ಬಳಸುವ ಈ ಪದಾರ್ಥಗಳಲ್ಲಿ ಅಡಗಿರುವ ಔಷದಿಯ ಗುಣಗಳು ಮತ್ತು ಅವುಗಳ ಬಳಕೆಯನ್ನು ಅರಿಯಲು, ಈ ಕೆಳಕಂಡ ಪಟ್ಟಿಗಳನ್ನು ಬಳಸಿ. ಈ ಮುಖೇಣ ನಿಮ್ಮ ಅನ್ವೇಷಣೆ ಪ್ರಾರಂಭಿಸಿ: https://www.fs.fed.us/wildflowers/ethnobotany/medicinal/ingredients.shtml
ಸಸ್ಯದ ಹೆಸರು
ವೈಜ್ಞಾನಿಕ ಹೆಸರು ~ ಸಾಮಾನ್ಯ ಹೆಸರು ಸಕ್ರಿಯ ಸಾಮಗ್ರಿ ಉಪಯೋಗಗಳು
ಅರಿಶಿಣ
ಕರ್ಕುಮ ಲ�ೋಂಗ ~ ಅರಿಶಿಣ ಕರ್ಕ್ಯುಮೈನ್ ನಂಜುನಿವಾರಕ
___________________
ಶಂಠಿ
ಫಿಯೋನಿಕುಲಮ್‌ವಲ್ಗರೆ ~ ಸ�ೋಂಪು _____________________________________________
_______________________ ~ _______________________ ಶೊಗೂಲ್, ಜಿಂಜೆರ�ೋಲ್
_____________________________________________
_______________________________________________
ಲವಂಗ
ಸಿಸಿಜಿಯಮ್‌ಅರ�ೋಮಾಟಿಕಮ್~ ಲ�ೋಂಗ್, ಲವಂಗ _________________________________________ _________________________________________
33
________________
ಕೆಮೇಲಿಯಾ ಸಿನೇಸಿಸ್~ _____________________ ಪ್ರೋಆಂಥ�ೋಸೈಯನೈಯನಿಡಿನ್ಸ್, ಕ್ಯಾಥೆಚಿನ್ಸ್, ಥಿಯಾನಿನ್ ______________________________________________
______________________
ಸಿನ್ನಾಮೋಮಮ್‌ಕಾಸಿಯಾ ~ ___________________________ ಸಿನಾಮಲ್‌ಡಿಹೈಡ್, ಯುಗೆನಾಲ್ _____________________________________
ಫೈಟ�ೋಪಿಯ 2020
ಬೆಂಗಳೂರು ವಿಜ್ಞಾನ ವೇದಿಕೆ
ಫೈಟ�ೋಪಿಯ @SCIGALLERYBLR ಈ ಕೈಪಿಡಿಯು ಮೆಚ್ಚುಗೆಯಾಗಿದ್ದರೆ, ನಿಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. #EXPERIMENTWITHSGB #PHYTOPIA
ಎಸ್.ಎ ಮುಖಾಂತರ ಕ್ರಿಯೇಟಿವ್‌ಕಾಮನ್ಸ್