ಕನಸಿನಲ್ಲಿ ಜಾಹಿರಾತು ನೆನ್ನೆ ರಾತ್ರಿ ನನ್ನ ಬೆಚ್ಚಗಿನ ಹಾಸಿಗೆಯಲ್ಲಿ ತಲೆಯ ಮೇಲೆ ಹೊದಿಕೆ ಎಳೆದು ಮಲಗಿದೆ, ಮೃದು, ಮೋಹಕ ಟೆಡ್ಡಿಯನ್ನು ತಬ್ಬಿ, ಮಲಗುವ ಉಡುಪು ಧರಿಸಿ ಮುದುರಿದ್ದೆ. ಎಂದಿನಂತೆ ಕನಸು ಕಂಡೆ ವಸ್ತುಗಳು ಮಿಂಚಿ ಮರೆಯಾಗುತ್ತಿದ್ದವು ಎಲ್ಲವೂ ಚಿನ್ನಾಗಿತ್ತು, ನನ್ನ ವಿಚಿತ್ರ ಕನಸುಗಳು ಸಾಗಿದ್ದವು. ಏಕಾಏಕಿ ಒಂದು ಜಾಹಿರಾತು ಮೂಡಿತು, ಮೊದಲೆಂದೂ ಇಂತಹುದನ್ನು ಕಂಡಿರಲಿಲ್ಲ, ಮನಸ್ಸಿನಲ್ಲಿ ಒಂದು ಕ್ಷಣ ಹಾದು ಕೊನೆಗೆ ಮಾಯವಾಯಿತು. “ಕಾರ್, ಕೊಳ್ಳಲು ಬಯಸುವಿರಾ, ಹಾಗಾದರೆ ಬೇರೆಲ್ಲ ಏಕೆ? ಟೆಸ್ಲಾ ಕೊಳ್ಳಿ “, ಎಂದು ಆಡ್‌ಸಾರಿತ್ತು, ಜೊತೆಗೆ ಕಾರುಗಳ ಫೋಟೋಗಳು ಮೂಡಿದ್ದವು. ಇವೆಲ್ಲ ಏಕೆ ಮೂಡಿದವೋ ಅರಿಯದು, ನನ್ನ ಚಿತ್ರ-ವಿಚಿತ್ರ ಕನಸುಗಳ ನಡುವೆ, ಎದ್ದಾಗ ವಾರ್ತೆಗಳನು ಕಂಡೆ, ಯಾರಿಗೂ ಸುಳಿವಿರಲಿಲ್ಲ. ಎಲ್ಲರೂ ಇಂತಹುದೇ ಕನಸ ಕಂಡಿದ್ದರು ಕಿರಿಕಿರಿಯ ಟೆಸ್ಲಾ ಜಾಹಿರಾತು, ಮಾಧ್ಯಮಗಳಲ್ಲಿ ಈ ವಿಷಯ ತುಂಬಿಹೋಗಿತ್ತು; ಏಕೆ ಹೀಗಾಯಿತು, ಗೊತ್ತಿಲ್ಲ! ಜಗವೇ ಈ ಕನಸ ಕಂಡಿತ್ತು, ಇದಕೆ ಏನು ಕಾರಣ?
ಮಹಾಶಯರೊಬ್ಬರು ಸುಳಿವು ನೀಡಿದರು, ಕನಸಿನಲ್ಲಿ ಏನದು, ಫ್ಲೂ ಅಂತೆ ಹಬ್ಬಿದ್ದು? ಸಂಜೆಗೆ ಈ ವಿಷಯ ಅರುಹಿದ ವ್ಯಕ್ತಿ ಯಾರು ಬೇರೆ ಯಾರೂ ಅಲ್ಲ ಇಲಾನ್‌ಮಸ್ಕ್, “ಇದು ನಮ್ಮದೇ ಕೈವಾಡ”, ಎಂದರು. “ಸೊಗಸಾಗಿ ಸಾಗಿತು”. ಎಂದು ಬಣ್ಣಿಸಿದರು, “ಅಂತರ್ಜಾಲ ಮುಖೇಣ ಎಲ್ಲರ ಮೆದುಳನ್ನು ಹೊಕ್ಕೆವು ಜಾಹಿರಾತು ತೋರಿದೆವು, ಅದು ನಾನೇ, ಎಂದು ಕಣ್ಣು ಮಿಟುಕಿಸಿದರು, ನನ್ನದೇ ಕಂಪನಿ ನ್ಯೂರಾಲಿಂಕ್!“